Wednesday 7 September 2016

ಜಾನಪದ ಸಾಂಸ್ಕೃತಿಕ ವೈಭವ


ವರ್ಕಾಡಿ ಗ್ರಾಮಪಂಚಾಯತ್ ಮಟ್ಟದ ಪರಿಶಿಷ್ಟ ಜಾತಿ ಹಾಗೂ ವರ್ಗದ ಮಕ್ಕಳಿಗಾಗಿ ಹಮ್ಮಿಕೊಂಡ "ಜಾನಪದ ಕಾರ್ಯಕ್ರಮ " ತಾರೀಕು ೨೯-೦೮-೨೦೧೬ ರಂದು ಜರಗಿತು . ಕೊಡ್ಲಮೊಗರು ಶ್ರೀ ವಾಣಿ ವಿಜಯ ಎ .ಯು .ಪಿ  ಶಾಲೆಯಲ್ಲಿ  ನಡೆದ ಈ ಸಮಾರಂಭದಲ್ಲಿ ಹಲವು ಶಾಲೆಯಿಂದ ಆಗಮಿಸಿದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು . ಬೆಳಗ್ಗೆ ನಡೆದ ಉದ್ಘಾಟನಾ ಪ್ರಕ್ರಿಯೆಯಲ್ಲಿ  ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಥಳೀಯ ಪಂಚಾಯತ್ ಸದಸ್ಯ ಶ್ರೀ ಗೋಪಾಲಕೃಷ್ಣ ಪಜ್ವ,"ಇಂತಹ ಹಳೆಯ ತಿರುಳನ್ನು ಇಂದಿನ ಮಕ್ಕಳಿಗೆ ಸಾದರಪಡಿಸುವ ಕಾರ್ಯಕ್ರಮ ಇಲ್ಲಿ ನಡೆಯುತ್ತಿರುವುದು ಅತ್ಯಂತ ಸ್ತುತ್ಯ"ಎಂದು ನುಡಿದರು. ಮಂಜೇಶ್ವರ ಕ್ಷೇತ್ರ ಯೋಜನಾಧಿಕಾರಿ ಶ್ರೀ ಮತಿ ರೋಜಾ ಕಾರ್ಯಕ್ರಮ ಉದ್ಘಾಟಿಸಿ"ಮಕ್ಕಳ ವಿಕಸನಕ್ಕೆ ಸಹಕಾರಿ"ಎಂದು ಹೇಳಿದರು. ಶಾಲಾ ಮ್ಯಾನೇಜರು ಶ್ರೀಮತಿ ಅನಸೂಯಾ ದೇವಿ, ಪಿ. ಟಿ. ಎ  ಅಧ್ಯಕ್ಷ ಶ್ರೀ ಜಮಾಲುದ್ದೀನ್ ದೈಗೋಳಿ, ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಪುಷ್ಪ, ನಿಕಟಪೂರ್ವ ಬಿ. ಪಿ. ಒ ಶ್ರೀ ವಿಜಯಕುಮಾರ್  ಪಾವಳ ಶುಭಹಾರೈಸಿದರು. ಶಾಲಾ  ಮುಖ್ಯ ಶಿಕ್ಷಕಿ ಶ್ರೀಮತಿ ಪದ್ಮನಯನ ಯನ್ .ಕೆ  ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಈ ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಜ್ಯೋತಿಲಕ್ಷ್ಮಿ, ಸುಜಾತ ಹಾಗೂ  ವಿಜಯಲಕ್ಷ್ಮಿ ಪ್ರಾರ್ಥನಾ ಗೀತೆ ಹಾಡಿದರು. ಅಧ್ಯಾಪಕ ಶ್ರೀ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ವರ್ಕಾಡಿ ಪಿ. ಇ . ಸಿ ಕಾರ್ಯದರ್ಶಿ ಸತ್ಯವತಿ ಟೀಚರ್ ಧನ್ಯವಾದ ವಿತ್ತರು. ಅಧ್ಯಾಪಕ ಶ್ರೀನಿವಾಸ ಭಟ್ ಸೇರಾಜೆ ಕಾರ್ಯಕ್ರಮ ನಿರೂಪಣೆ ಗೈದರು.