Friday 11 August 2017

ಸ್ವಾತಂತ್ರ್ಯ ದಿನ (ಕನ್ನಡ ಭಾಷಣ )

ವೇದಿಕೆಯಲ್ಲಿರುವ ಎಲ್ಲ ಗಣ್ಯ ವ್ಯಕ್ತಿಗಳೇ ,
ಪ್ರೀತಿಯ ಅಧ್ಯಾಪಕ ವೃಂದದವರೇ , ರಕ್ಷಕರೇ
 ಹಾಗೂ ಸಹಪಾಠಿಗಳೇ ,ಸ್ವಾತಂತ್ರ್ಯ ದಿನಾಚರಣೆಯ 
ಈ ಸಂದರ್ಭದಲ್ಲಿ ಒಂದೆರಡು ಮಾತುಗಳನ್ನಾಡಲು 
ಬಯಸುತ್ತೇನೆ . 
       1947ರಲ್ಲಿ ನಮ್ಮ ಭಾರತ ಸ್ವತಂತ್ರವಾದದ್ದು 
ಎಲ್ಲರಿಗೂ ಗೊತ್ತಿರುವ ವಿಚಾರ . ನಮ್ಮ ರಾಷ್ಟ್ರ ಧ್ವಜ
 ಮೂರು ಬಣ್ಣಗಳಿಂದ ಕಂಗೊಳಿಸಿ ಹಾರಾಡುತ್ತಿರುವ 
ಈ ದಿವಸ ಎಲ್ಲರಿಗೂ ಹೆಮ್ಮೆ ಎನಿಸುತ್ತದೆ.
 ಈ ಧ್ವಜದ ಹಿಂದೆ ನೂರಾರು ವರ್ಷಗಳ ತ್ಯಾಗದ 
ಕತೆಯಿದೆ.  ಬಲಿದಾನದ ಇತಿಹಾಸವಿದೆ . ಹೋರಾಟದ
 ನೆನಪುಗಳು ಇವೆ . ನಮ್ಮ ಹಿರಿಯರ ಒಗ್ಗಟ್ಟು
 ಆ ಕಾಲಕ್ಕೆ ಗೆದ್ದಿತ್ತು . ಹಾಗಾಗಿ ಎಲ್ಲ ನೋವನ್ನು
 ಮರೆತು ಸಂತೋಷವನ್ನು ಪಡೆದ ದಿನವನ್ನು
 ಪ್ರತಿ ವರ್ಷ ಎಲ್ಲರೂ ಸೇರಿ ಆಚರಿಸುತ್ತೇವೆ . 
          ನಮಗೆ ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳು ಕಳೆದಿವೆ.
 ಆದರೆ ದೇಶ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗಲಿಲ್ಲ . 
ಮನಸ್ಸು ಮಾಡಿದ್ದರೆ ಮೊದಲ ಸ್ಥಾನದಲ್ಲಿ ಇರಬಹುದಿತ್ತು . 
ನಮ್ಮಲ್ಲಿ ಸಾಕಷ್ಟು ಸಂಪತ್ತು ಇದೆ. ಆದರೆ ಅದನ್ನು ಸರಿಯಾಗಿ 
ಬಳಸಿಕೊಳ್ಳಲಿಲ್ಲ . ಇನ್ನಾದರೂ "ನಮ್ಮ ದೇಶ "ಎನ್ನುವ 
ಅಭಿಮಾನದಿಂದ ದುಡಿಯಬೇಕು. 
               ಒಂದು ಕಾಲಕ್ಕೆ ನಮ್ಮ ದೇಶ ಜಗತ್ತಿಗೇ 
ಮಾರ್ಗದರ್ಶನ ಮಾಡುತಿತ್ತು. ನಮ್ಮಲ್ಲಿ ಅನೇಕ 
ಪುಣ್ಯ ಪುರುಷರು , ವೀರ ಮಹಿಳೆಯರು ಆಗಿಹೋಗಿದ್ದಾರೆ.
 ಅವರ ಆದರ್ಶಗಳನ್ನು ನಾವು ಪಾಲಿಸಬೇಕು .
ಈ ಸಂದರ್ಭದಲ್ಲಿ ಕಳೆದ ಕಷ್ಟಗಳನ್ನು ಮತ್ತೊಮ್ಮೆ ನೆನಪಿಸಬೇಕು. 
ಆಗ ಸ್ವಾತಂತ್ರ್ಯದ  ಬೆಲೆ ಗೊತ್ತಾಗುತ್ತದೆ . ಮುಂದೆ ದೇಶಕ್ಕಾಗಿ 
ನಮ್ಮ ಕೈಲಾಗುವ ಸೇವೆ ಮಾಡುತ್ತಾ ಭಾರತ ಮಾತೆಯ
 ಋಣವನ್ನು ತೀರಿಸೋಣ ಎಂದು ಹೇಳುತ್ತ ನನ್ನ
 ಮಾತುಗಳನ್ನು ನಿಲ್ಲಿಸುತ್ತೇನೆ 
                        
                                 ಜೈ ಹಿಂದ್ 

No comments:

Post a Comment